Google search engine
HomeCINEMADrug case: ನಟ ಶೈನ್ ಟಾಮ್ ಚಾಕೊ, ಇತರ 6 ಮಂದಿ ಖುಲಾಸೆಗೊಳಿಸಿದ ಕೇರಳ ನ್ಯಾಯಾಲಯ

Drug case: ನಟ ಶೈನ್ ಟಾಮ್ ಚಾಕೊ, ಇತರ 6 ಮಂದಿ ಖುಲಾಸೆಗೊಳಿಸಿದ ಕೇರಳ ನ್ಯಾಯಾಲಯ

ಕೊಚ್ಚಿ: 2015ರ ಡ್ರಗ್ಸ್‌ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಟ ಶೈನ್ ಟಾಮ್ ಚಾಕೊ ಮತ್ತು ಇತರ ಆರು ಜನರನ್ನು ಖುಲಾಸೆಗೊಳಿಸಿ ಕೇರಳ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.ಎರ್ನಾಕುಲಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸುಲೇಖಾ ಎಂ ಅವರು, ಈ ಪ್ರಕರಣದಲ್ಲಿ ನಟ ಶೈನ್ ಮತ್ತು ನಾಲ್ವರು ಮಹಿಳೆಯರಾದ ರೇಷ್ಮಾ ರಂಗಸ್ವಾಮಿ, ಸಹಾಯಕ ನಿರ್ದೇಶಕಿ ಬ್ಲೆಸ್ಸಿ ಸಿಲ್ವೆಸ್ಟರ್, ಟಿನ್ಸಿ ಬಾಬು ಮತ್ತು ಸ್ನೇಹಾ ಬಾಬು ಅವರನ್ನು ಖುಲಾಸೆಗೊಳಿಸಿದರು. ಅವರಲ್ಲದೆ, ನೈಜೀರಿಯಾದ ಪ್ರಜೆ ಒಕೋವ್ ಚಿಗೋಜಿ ಕಾಲಿನ್ಸ್ ಮತ್ತು ತಮಿಳುನಾಡು ಮೂಲದ ಪೃಥ್ವಿ ರಾಜ್ ಅವರನ್ನು ಸಹ ನ್ಯಾಯಾಲಯ ಖುಲಾಸೆಗೊಳಿಸಿದೆ.

ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ (ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ) ಅಡಿ ಪ್ರಕರಣ ದಾಖಲಿಸಲಾಗಿತ್ತು.

A1 ರಿಂದ A7 ಆರೋಪಿಗಳು (ಚಾಕೊ ಮತ್ತು ಇತರರು) ಎನ್‌ಡಿಪಿಎಸ್‌ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧಗಳಲ್ಲಿ ತಪ್ಪಿತಸ್ಥರಲ್ಲ ಎಂದು ಸಾಬೀತಾಗಿದ್ದು, ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಲಯವು ತನ್ನ ಸಂಕ್ಷಿಪ್ತ ಆದೇಶದಲ್ಲಿ ತಿಳಿಸಿದೆ.

2015ರ ಜನವರಿ 31ರಂದು ಕಡವಂತ್ರದಲ್ಲಿರುವ ಐಷಾರಾಮಿ ಫ್ಲಾಟ್‌ನಲ್ಲಿ ಕೊಕೇನ್ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ನಟ ಚಾಕೊ ಸೇರಿದಂತೆ ಐವರನ್ನು ಬಂಧಿಸಲಾಗಿತ್ತು.

“ತನ್ನ ಮೇಲೆ ಭೀಕರ ದಾಳಿ ಮಾಡಿದ್ದ ಕಳ್ಳನ ಮೇಲೆ ಕನಿಕರ ವ್ಯಕ್ತಪಡಿಸಿದ ನಟ ಸೈಫ್!”

ಕಳ್ಳತನ ಮಾಡಲು ನನ್ನ ಮನೆಗೆ ಬಂದು, ನನ್ನ ಮೇಲೆ ದಾಳಿ ಮಾಡಿದ ಕಳ್ಳ ನನಕ್ಕಿಂತಲೂ ಹೆಚ್ಚು ಸಂಕಷ್ಟಕ್ಕೆ ಸಿಲುಕಿಕೊಂಡ ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಹೇಳಿದ್ದಾರೆ.ದೆಹಲಿ ಟೈಮ್ಸ್ ವಾಹಿನಿ ಜೊತೆ ಮಾತನಾಡಿರುವ ಅವರು, ದಾಳಿ ನಡೆಸಿದ್ದ ಕಳ್ಳನ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದಾರೆ.

ಇಂತಹ ಘಟನೆ ಆಗಬಾರದಿತ್ತು. ನಾನು ನಿರೀಕ್ಷಿಸಿರಲಿಲ್ಲ. ಆದರೆ, ಕಳ್ಳತನ ಮಾಡುವ, ಅಪರಾಧ ಕೃತ್ಯಗಳನ್ನು ಎಸುಗುವ ಎಲ್ಲರಿಗೂ ಒಂದಲ್ಲ ಒಂದು ರೀತಿ ಶಿಕ್ಷೆ ಕಾದಿರುತ್ತದೆ. ನೋಡಿ ಇವಾಗ ನನ್ನ ಮೇಲೆ ದಾಳಿ ಮಾಡಿದಾತ, ಕಳ್ಳತನ ಮಾಡಲು ಬಂದು ನನಕ್ಕಿಂತ ಹೆಚ್ಚು ತೊಂದರೆಗೆ ಸಿಲುಕಿದ್ದಾನೆ ಎಂದು ಹೇಳಿದ್ದಾರೆ.

ಮನೆಯಲ್ಲಿ ಗನ್, ಗನ್ ಮ್ಯಾನ್ ಹಾಗೂ ಹೆಚ್ಚುವರಿ ಸೆಕ್ಯೂರಿಟಿಗಳನ್ನು ಇಟ್ಟುಕೊಳ್ಳುತ್ತಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, ಇದರಲ್ಲಿ ನನಗೆ ನಂಬಿಕೆ ಇಲ್ಲ. ಏನು ನಡೆಯಬೇಕೋ ಅದು ನಡೆಯುತ್ತದೆ. ಆ ರೀತಿ ಪರಿಸ್ಥಿತಿ ನಿರ್ಮಿಸಿಕೊಳ್ಳುವುದು ನನಗೆ ದುಸ್ವಪ್ನಕ್ಕೆ ಸಮ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಮುಂಬೈ ಪೊಲೀಸರು ತ್ವರಿತವಾಗಿ ಹಾಗೂ ಉತ್ತಮವಾಗಿ ತನಿಖೆ ಮಾಡಿದ್ದಾರೆ. ಮುಂಬೈ ಸುರಕ್ಷಿತ ನಗರ ಎಂದು ನಾನು ನಂಬುತ್ತೇನೆ. ಆದರೆ, ಇಂತಹ ಘಟನೆಗಳು ಲಂಡನ್, ನ್ಯೂಯಾರ್ಕ್‌ನಲ್ಲೂ ನಡೆಯುತ್ತವೆ. ಈಗಿನ ಕಾಲದಲ್ಲಿ ನಾವು ಎಷ್ಟು ಎಚ್ಚರವಾಗಿದ್ದರೂ ಕಡಿಮೆಯೇ ಎಂದು ಹೇಳಿದ್ದಾರೆ.ಬಾಂದ್ರಾದದಲ್ಲಿರುವ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಲ್ಲಿರುವ ಸೈಫ್ ಅಲಿ ಖಾನ್ ಮನೆಗೆ ಜ. 16ರಂದು ನುಗ್ಗಿದ್ದ ಆರೋಪಿ, ಚೂರಿಯಲ್ಲಿ ಸತತವಾಗಿ ಇರಿದಿದ್ದ. ಗಾಯಗೊಂಡಿದ್ದ 54 ವರ್ಷದ ಸೈಫ್, ಲೀಲಾವತಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಂಡು ಐದು ದಿನಗಳ ಬಳಿಕ ಬಿಡುಗಡೆಗೊಂಡಿದ್ದರು.ಪೊಲೀಸರು ಆತನನ್ನು ಠಾಣೆಯಲ್ಲಿ ಬಂಧಿಸಿದ್ದು, ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್‌ಗೆ ಬದಲಾಗಿ ಬಿಜೊಯ್ ದಾಸ್ ಎಂದು ಹೆಸರು ಬದಲಿಸಿಕೊಂಡಿದ್ದ.

RELATED ARTICLES

LEAVE A REPLY

Please enter your comment!
Please enter your name here

News Portal | WordPress Portal |
Deneme Bonusu Veren Siteler +1000 TL | 2025 Güncel | Güvenilir bahis siteleri | Ekim 2025 | Güvenilir Slot Siteleri 2025 – Dead or Alive 2 oyna
Trusted Casino Sites | October 2025 Updated | Trusted Betting Sites | October 2025 | Safe Gambling Sites 2025 – Dead or Alive 2 play