Google search engine
HomeCRIMEಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ 17ಕ್ಕೂ ಹೆಚ್ಚು ಮಂದಿಗೆ ಗಾಯ

ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ 17ಕ್ಕೂ ಹೆಚ್ಚು ಮಂದಿಗೆ ಗಾಯ

11feb 2025- ಕಾರವಾರ: ಕೆಎಸ್‌ಆರ್‌ಟಿಸಿ ಬಸ್ಸೊಂದು ಪಲ್ಟಿಯಾದ ಪರಿಣಾಮ 17ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಬಳಿ ನಡೆದಿದೆ.

ಕೆಎಸ್‌ಆರ್‌ಟಿಸಿ ಬಸ್ ಶಿರಸಿಯಿಂದ ಬೆಳಗಾವಿಗೆ ಹೋಗುತ್ತಿತ್ತು.

ಚಾಲಕನ ಅತೀ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿದ ಬಸ್ ಮರಕ್ಕೆ ಡಿಕ್ಕಿಯಾಗಿ ಪಲ್ಟಿ‌ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಗಂಭೀರ ಗಾಯಗೊಂಡ ಇಬ್ಬರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ – 18 ಕೆಜಿ ಗಾಂಜಾ ಜಪ್ತಿ!

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಗಾಂಜಾ ಮಾಫಿಯಾ ಜೋರಾಗಿದೆ. ಅನೇಕ ಯುವಕ-ಯುವತಿಯರು ಮಾದಕ ವ್ಯಸನಿಗಳಾಗಿ ಬದಲಾಗುತ್ತಿದ್ದಾರೆ. ಈ ಸಂಬಂಧ ಮಹದೇವಪುರ ಪೊಲೀಸರ ಕಾರ್ಯಾಚರಣೆ ನಡೆಸಿದ್ದಾರೆ.

ರೇಡ್ ಮಾಡಿರುವ ಪೊಲೀಸರು 18 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.ಆರೋಪಿಗಳಾದ ಅಶೋಕ್ ಪ್ರದಾನ್ ಮತ್ತು ಮನೋಜ್ ಪ್ರದಾನ್ ಬಂಧನವಾಗಿದೆ.

ಇಬ್ಬರು ಒಡಿಶಾ ಮೂಲದವರು ಎಂದು ಗೊತ್ತಾಗಿದೆ.

ಟ್ರೈನ್ ನಲ್ಲಿ ಗಾಂಜಾ ತಂದು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಮಹದೇವಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಟಿವಿ ಶೋನಲ್ಲಿ ಸ್ಪರ್ಧಿಗೆ ಅಸಭ್ಯ ಪ್ರಶ್ನೆ ಕೇಳಿದ ಖ್ಯಾತ ಯೂಟ್ಯೂಬರ್‌!- ಬಿತ್ತು ಕೇಸ್

ಮುಂಬೈ: ಇಂಡಿಯಾಸ್‌ ಗಾಟ್‌ ಟ್ಯಾಲೆಂಟ್‌ ಟಿವಿ ಶೋನಲ್ಲಿ ಪ್ಯಾನಲಿಸ್ಟ್‌ ಆಗಿ ಸೇರಿಕೊಂಡಿದ್ದ ಖ್ಯಾತ ಯೂಟ್ಯೂಬರ್‌ ರಣವೀರ್ ಅಲ್ಹಾಬಾದಿಯಾ ಸ್ಪರ್ಧಿಯೊಬ್ಬರಿಗೆ ತಂದೆ ತಾಯಿಯ ಬೆಡ್‌ ರೂಂ ಬಗೆಗಿನ ಅಸಭ್ಯ ಪ್ರಶ್ನೆ ಕೇಳಿ ಭಾರೀ ವಿವಾದಕ್ಕೆ ಕಾರಣವಾಗಿದ್ದಾರೆ.ಇದೀಗ ರಣವೀರ್‌ ತಮ್ಮ ಅಸಭ್ಯ ಪ್ರಶ್ನೆಗೆ ಕ್ಷಮೆ ಕೇಳಿದ್ದಾರೆ.

ಹೌದು, ರಣವೀರ್‌ ಟಿವಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ಕೇಳಬಾರದ ಪ್ರಶ್ನೆ ಕೇಳಿದ್ದಾರೆ. ತಮಾಷೆಯಾಡುವ ಭರದಲ್ಲಿ ರಣವೀರ್‌ ಸ್ಪರ್ಧಿಯೊಬ್ಬರಿಗೆ ಪೋಷಕರ ಲೈಂಗಿಕ ಕ್ರಿಯೆ ಬಗ್ಗೆ ಪ್ರಶ್ನಿಸಿದ್ದಾರೆ. ನಿಮ್ಮ ಪೋಷಕರು ಪ್ರತಿ ದಿನ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡ್ತೀರಾ? ಅಥವಾ ನೀವು ಒಮ್ಮೆ ಮಾಡಿ, ಅದನ್ನು ಶಾಶ್ವತವಾಗಿ ನಿಲ್ಲಿಸುತ್ತೀರಾ? ಎಂದು ರಣವೀರ್ ಸ್ಪರ್ಧಿಗೆ ಕೇಳಿದ್ದಾರೆ.

ಇಂತಹ ಅಸಹ್ಯ ಪ್ರಶ್ನೆ ಕೇಳಿದ ರಣವೀರ್‌ ವಿರುದ್ಧ ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೂಡಾ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ರಣವೀರ್ ಅಲ್ಹಾಬಾದಿಯಾ ಜೊತೆಗೆ ಹಾಸ್ಯನಟ ಸಮಯ್ ರೈನಾ ವಿರುದ್ಧ ಮುಂಬೈ ಪೊಲೀಸ್ ಆಯುಕ್ತರು ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದೀಗ ತಮ್ಮ ಹೇಳಿಕೆ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸುತ್ತಲೇ ರಣವೀರ್‌ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನನ್ನ ಹೇಳಿಕೆ ಅನುಚಿತವಾಗಿರಲಿಲ್ಲ, ತಮಾಷೆಯೂ ಆಗಿರಲಿಲ್ಲ. ಹಾಸ್ಯ ನನ್ನ ಶಕ್ತಿ ಅಲ್ಲ. ಕ್ಷಮೆಯಾಚಿಸಲು ನಾನು ಬಂದಿದ್ದೇನೆ. ನಾನು ಈ ರೀತಿ ಮಾತಾಡಬಾರದಿತ್ತು. ಮಾತಾಡಿಬಿಟ್ಟಿದ್ದೇನೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಯೂಟ್ಯೂಬರ್​ ರಣವೀರ್ ಅಲ್ಹಾಬಾದಿಯಾ ಕೇಳಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

News Portal | WordPress Portal |
Deneme Bonusu Veren Siteler +1000 TL | 2025 Güncel | Güvenilir bahis siteleri | Ekim 2025 | Güvenilir Slot Siteleri 2025 – Dead or Alive 2 oyna
Trusted Casino Sites | October 2025 Updated | Trusted Betting Sites | October 2025 | Safe Gambling Sites 2025 – Dead or Alive 2 play