Google search engine
HomeLOCAL NEWSಅನೇಕ ಕಡೆಗಳಲ್ಲಿ ಕಡಿಮೆಯೇ ಆಗಿಲ್ಲ ಮೆಟ್ರೋ ಟಿಕೆಟ್ ದರ!

ಅನೇಕ ಕಡೆಗಳಲ್ಲಿ ಕಡಿಮೆಯೇ ಆಗಿಲ್ಲ ಮೆಟ್ರೋ ಟಿಕೆಟ್ ದರ!

ನಮ್ಮ ಮೆಟ್ರೋ ಟಿಕೆಟ್ ಬೆಲೆ ಭಾರೀ ಮಟ್ಟದಲ್ಲಿ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಸರ್ಕಾರ ಬಿಗ್ ಶಾಕ್ ನೀಡಿತ್ತು. ಇದರಿಂದ ಬೇಸರಗೊಂಡಿದ್ದ ಸಾರ್ವಜನಿಕರು ಮೆಟ್ರೋ ಪ್ರಯಾಣವೇ ಬೇಡವೆಂದು ಬಿಎಂಟಿಸಿ, ಖಾಸಗಿ ವಾಹನಗಳ ಮೊರೆ ಹೋಗಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡು ಇದೀಗ ಕೆಲವೆಡೆ ಮಾತ್ರ ಹೊಸ ದರ ಜಾರಿ ಮಾಡಿದ್ರೆ, ಇನ್ನು ಕೆಲವೆಡೆ ಅದೇ ಟಿಕೆಟ್​ ಬೆಲೆ ಇದೆ.

ಟಿಕೆಟ್ ದರ ಬದಲಾವಣೆ ಆಗದ ಮೆಟ್ರೋ ಸ್ಟೇಷನ್​ಗಳ ವಿವರ ಇಲ್ಲಿದೆ

  • ಮೆಜೆಸ್ಟಿಕ್​ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣ- 60 ರೂಪಾಯಿ
  • ಮೆಜೆಸ್ಟಿಕ್​ನಿಂದ ಸಿಂಗಯ್ಯನಪಾಳ್ಯ ಮೆಟ್ರೋ ನಿಲ್ದಾಣ- 60 ರೂಪಾಯಿ
  • ಮೆಜೆಸ್ಟಿಕ್​ ಟು ಕೆಂಗೇರಿ ಮೆಟ್ರೋ ನಿಲ್ದಾಣ- 60 ರೂ.
  • ಮೆಜೆಸ್ಟಿಕ್ ಟು ಸೀತಾರಾಮನಪಾಳ್ಯ- 60 ರೂ.
  • ಮೆಜೆಸ್ಟಿಕ್​ನಿಂದ ಕೋಣನಕುಂಟೆ ಕ್ರಾಸ್- 60 ರೂ.
  • ಮೆಜೆಸ್ಟಿಕ್​ನಿಂದ ರಾಜರಾಜೇಶ್ವರಿ ನಗರ- 50 ರೂ.

8 ಲಕ್ಷ ಅಲ್ಪಸಂಖ್ಯಾತವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ: ಸಚಿವ ಜಮೀರ್ ಅಹಮದ್:

‘ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಪ್ರಸಕ್ತ ಸಾಲಿನಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ 7.85 ಲಕ್ಷ ವಿದ್ಯಾರ್ಥಿಗಳಿಗೆ ₹290 ಕೋಟಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.‘6.25 ಲಕ್ಷ ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ ಈಗಾಗಲೇ ₹180 ಕೋಟಿ ವರ್ಗಾವಣೆ ಮಾಡಲಾಗಿದೆ. 1.60 ಲಕ್ಷ ವಿದ್ಯಾರ್ಥಿಗಳಿಗೆ ₹100 ಕೋಟಿ ಅನುದಾನ ಅಗತ್ಯ ಇರುವ ಬಗ್ಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ವಿದ್ಯಾಸಿರಿ’ ಯೋಜನೆಯಲ್ಲಿ ಜನವರಿ ಅಂತ್ಯದವರೆಗೆ ಹಾಸ್ಟೆಲ್‌ಗಳಲ್ಲಿ 23 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಹಾಸ್ಟೆಲ್‌ ಪ್ರವೇಶ ಸಿಗದ 5,753 ವಿದ್ಯಾರ್ಥಿಗಳಿಗೆ ಮಾಸಿಕ ₹1,500ರಂತೆ 10 ತಿಂಗಳ ಮೊತ್ತ ₹ 5 ಸಾವಿರ ವರ್ಗಾವಣೆ ಮಾಡಲಾಗಿದೆ. 200 ವಿದ್ಯಾರ್ಥಿಗಳ ಆಧಾರ್ ಲಿಂಕ್ ಸಮಸ್ಯೆ ಇದೆ. ಅದನ್ನು ಸರಿಪಡಿಸಿದ ನಂತರ ಅವರಿಗೂ ಹಣ ವರ್ಗಾವಣೆ ಆಗಲಿದೆ’ ಎಂದು ವಿವರಿಸಿದ್ದಾರೆ.

‘ನಿರ್ದೇಶನಾಲಯಕ್ಕೆ ಪ್ರಸಕ್ತ ವರ್ಷ ನಿಗದಿಯಾಗಿದ್ದ ₹2,292 ಕೋಟಿಯಲ್ಲಿ ₹1,941 ಕೋಟಿ ಬಿಡುಗಡೆಯಾಗಿದೆ. ಅದರಲ್ಲಿ ₹1,608 ಕೋಟಿ (ಶೇ 83) ವೆಚ್ಚವಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 7,500 ವಿದ್ಯಾರ್ಥಿಗಳಿಗೆ ‘ಅರಿವು’ ಯೋಜನೆ ಹಾಗೂ ವಿದೇಶಿ ವಿದ್ಯಾಭ್ಯಾಸ ನೆರವು ಯೋಜನೆಯಡಿಯಲ್ಲಿ ₹92.50 ಕೋಟಿ ಸಾಲ ವಿತರಿಸಲಾಗಿದೆ. ವಕ್ಫ್ ಮಂಡಳಿಗೆ ಬಿಡುಗಡೆಯಾದ ₹‌157 ಕೋಟಿಯಲ್ಲಿ ₹125 ಕೋಟಿ ವೆಚ್ಚ ಮಾಡಲಾಗಿದೆ’ ಎಂದೂ ಹೇಳಿದ್ದಾರೆ.

t.

RELATED ARTICLES

LEAVE A REPLY

Please enter your comment!
Please enter your name here

News Portal | WordPress Portal |
Deneme Bonusu Veren Siteler +1000 TL | 2025 Güncel | Güvenilir bahis siteleri | Ekim 2025 | Güvenilir Slot Siteleri 2025 – Dead or Alive 2 oyna
Trusted Casino Sites | October 2025 Updated | Trusted Betting Sites | October 2025 | Safe Gambling Sites 2025 – Dead or Alive 2 play