ಇಂಡಿ:feb 2025- ಸಾರ್ವಜನಿಕ ಸರ್ಕಾರಿ ರಸ್ತೆ ಅಳತೆ ಮಾಡಲು ಹೋದ ಭೂಮಾಪಕರೊಬ್ಬರಿಗೆ ಏಕಾಏಕಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಲೋಣಿ (ಬಿ.ಕೆ.) ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಗ್ರಾಮದ ಸರ್ವೇ ನಂ 341 ಮತ್ತು 342ರಲ್ಲಿನ ಸರ್ಕಾರಿ ರಸ್ತೆ ಅಳತೆ ಸಲುವಾಗಿ ಚಡಚಣ ತಹಶೀಲ್ದಾರ್ ಆದೇಶದಂತೆ ಭೂಮಾಪನ ಇಲಾಖೆಯ ಭೂಮಾಪಕ ಮಹಾಂತಪ್ಪ ಶ್ರೀಶೈಲ ಸಜ್ಜನ ಸ್ಥಳಕ್ಕೆ ಹೋಗಿದ್ದಾರೆ.
ಅವರ ಮೇಲೆ ಗ್ರಾಮದ ವಿಕಾಸ ಕಲ್ಲಣ್ಣಗೌಡ ಪಾಟೀಲ, ರವೀಂದ್ರ ಗುರಪ್ಪ ಕಾಂಬ್ಳೆ, ಸಿದ್ದರಾಮ ಗಿರಮಲ್ಲ ಉಟಗಿ, ವಿಕಾಸ ಜೀವಪ್ಪ ಕಾಂಬಳೆ ಹಾಗೂ ಇತರರು ಬಂದು ಅಳತೆ ಕೆಲಸಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಹಲ್ಲೆಯನ್ನು ಖಂಡಿಸಿ ಭೂಮಾಪನ ಇಲಾಖೆಯ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಇಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದುಗಿನ ಬಡ್ಡಿ ಯಲ್ಲಪ್ಪಗೆ ಸೇರಿದ ಮನೆಗಳಲ್ಲಿ ಲಾಕರ್ಗಳು ಒಡೆದಂತೆಲ್ಲ ಕೋಟಿಗಟ್ಟಲೆ ಹಣ ಮತ್ತು ಚಿನ್ನಾಭರಣ!
ಗದಗ: ನಗರದ ಬಡ್ಡಿ ಯಲ್ಲಪ್ಪ ಹೆಸರಿನ ಮನುಷ್ಯ ಜನರಿಂದ ಅಂದರೆ ತನ್ನಿಂದ ಸಾಲಪಡೆದವರಿಂದ ಬಡ್ಡಿ ದುಡ್ಡನ್ನು ಪೀಕಿ ಪೀಕಿ ಎಷ್ಟು ಹಣ ಮಾಡಿದ್ದಾನೆ ಮತ್ತು ಬಚ್ಚಿಟ್ಟಿದ್ದಾನೆ ಅಂತ ಒಮ್ಮೆ ನೋಡಿ. ಅವನ ಅಸಲು ಹೆಸರು ಯಲ್ಲಪ್ಪ ಮಿಸ್ಕಿನ್ ಆದರೆ ಜನ ಬಡ್ಡಿ ಯಲ್ಲಪ್ಪ ಅಂತ್ಲೇ ಕರೆಯೋದು. ನಿನ್ನೆ ಪೊಲೀಸರು ದೂರೊಂದರ ಆಧಾರದ ಮೇಲೆ ಅವನ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಕೋಟಿಗಟ್ಟಲೆ ಹಣ ಪತ್ತೆಯಾಗಿದೆ. ಇವತ್ತು ಅವನಿಗೆ ಸೇರಿದ ಕೇಸರ್ ಫೈನಾನ್ಸ್ ಬಳಿಯಿರುವ ಮನೆಯ ಮೇಲೆ ದಾಳಿ ನಡೆಸಿದಾಗಲೂ ಕಂತೆ ಕಂತೆ ನೋಟುಗಳು ಮತ್ತು ಕಿಲೋಗಟ್ಟಲೆ ಚಿನ್ನಾಭರಣ ಪತ್ತೆಯಾಗಿವೆ. ಅಶೋಕ ಗಣಾಚಾರಿ ಎನ್ನುವವರು ಯಲ್ಲಪ್ಪನಿಂದ ಸಾಲ ಪಡೆದು ಅವನು ನೀಡುತ್ತಿದ್ದ ಕಿರುಕುಳ ತಾಳಲಾಗದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದಾಳಿನಡೆಸಿ ಶೋಧ ನಡೆಸಿದಾಗ ಸಿಕ್ಕೊರೋದು ಕೋಟಿ ಕೋಟಿ ಹಣ ಮತ್ತು ಅಪಾರ ಪ್ರಮಾಣದ ಚಿನ್ನಾಭರಣ!

5000 ಲಂಚಕ್ಕೆ ಕೈಚಾಚಿ ಲೋಕಾ ಬಲೆಗೆ ಬಿದ್ದ ಗಾ.ಪಂ ಅಧ್ಯಕ್ಷ!
ಕಲಬುರಗಿ : ಲಂಚ ಸ್ವೀಕರಿಸುವ ವೇಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ರೆಡ್‌ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿದ್ದಾರೆ
ಕಲಬುರಗಿಯ ಕಾಳಗಿ ತಾಲ್ಲೂಕಿನ ರಾಜಪುರ್ ಗ್ರಾಮ ಪಂಚಾಯತ್ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ ಗ್ರಾ.ಪಂ ಅಧ್ಯಕ್ಷ ಪ್ರಕಾಶ್ ರೆಡ್ಡಿ 5000 ಸಾವಿರ ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದಿದ್ದಾರೆ
ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೇ ನಂಬರ್ 4- ರಲ್ಲಿ ಡಿಸಿಬಿ ತೆರಿಗೆ ಹೆಸರನ್ನು ನೋಂದಾಯಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ರೆಡ್ಡಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ್ ದೂರು ನೀಡಿದ್ದರು. ದೂರಿನನ್ವಯ ದಿಢೀರ್ ದಾಳಿ ನಡೆಸಿ ಪ್ರಕಾಶ್‌ರೆಡ್ಡಿಯನ್ನು ಲೋಕಾ ಪೊಲೀಸರು ಬಲೆಗೆ ಕೆಡವಿದ್ದಾರೆ

ಪೊಲೀಸರಿಗೆ ಕಲ್ಲು ಹೊಡೆದರೆ ಸುಮ್ಮನಿರಲು ಸಾಧ್ಯವೇ? – ಗೃಹಸಚಿವ ಪರಮೇಶ್ವರ್:

ಮೈಸೂರಿನ ಉದಯಗಿರಿ ಗಲಭೆ ಕೇಸ್ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರಕಾರಣವನ್ನು ಸೀರಿಯಸ್ ಆಗಿ ತೆಗೆದುಕೊಳ್ತೇವೆ.ಯಾರದ್ದೂ ಮೂಲಾಜಿಲ್ಲದೇ ಕ್ರಮ ತೆಗೆದುಕೊಳ್ತೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಅವರು , ಪೊಲೀಸ್ ಠಾಣೆಗೆ ಕಲ್ಲು ಹೊಡಿತಾರೆ ಕಾರ್ ಬೈಕ್ ಜಖಂ ಮಾಡ್ತಾರೆ ಎಂದರೆ ಸುಮ್ಮನಿರಲು ಸಾಧ್ಯವಿಲ್ಲ.ಕಠಿಣ ಕ್ರಮ ತೆಗೆದುಕೋಳ್ತೇವೆ.ಯಾರು ಅನ್ನೋದನ್ನ ಕ್ಯಾಮರಾದಲ್ಲಿ ಐಡೆಂಟಿಪೈ ಮಾಡಿದ್ದಾರೆ. ಅವರೆಲ್ಲರನ್ನ ಅರೆಸ್ಟ್ ಮಾಡೋಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಬಹಳ ಕಠಿಣವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದೇನೆ. ಕೇಸ್ ನಲ್ಲಿ ಪೊಲೀಸರ ವೈಫಲ್ಯ ಇಲ್ಲ. ನಮಗೆ ಆರೋಪಿಯನ್ನು ಹ್ಯಾಂಡೋವರ್ ಮಾಡಿ ಎಂದರೆ ಕಾನೂನು ಅವರ ಕೈಗೆ ಕೊಡೊಕಾಗುತ್ತಾ?ನಮ್ಮ ಕೈಲಿ ಕೊಡಿ ಎಂದರೆ ಏನು ಮಾಡೋದು.ಅವರದ್ದೇನಿದ್ದರರೂ ಪೊಲೀಸರಿಗೆ ಹೇಳಬೇಕಿತ್ತು ಎಂದು ಪರಂ ತಿಳಿಸಿದರು.. ಬಿಜೆಪಿ ಸರ್ಕಾರ ಇದ್ದಾಗ ಈ ರೀತಿಯ ಘಟನೆ ಆಗಿರಲಿಲ್ವಾ? ಅವರ ಸರ್ಕಾರ ಇದ್ದಾಗ ಎಷ್ಟು ಕೇಸ್ ಆಗಿದೆ ಎಂದು ಹೇಳಿ ನೋಡೋಣ ಎಂದು ಪರಮೇಶ್ವರ್ ಟಾಂಗ್ ನೀಡಿದರು.ಇನ್ನು, ಎಫ್‌ಐಆರ್‌ನಲ್ಲಿ ಸಂಗಮೇಶ್ ಪುತ್ರನ ಹೆಸರನ್ನ ಕೈ ಬಿಟ್ಟಿರೋ ವಿಚಾರಕ್ಕೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ಕೊಟ್ಟರು.ಪೊಲೀಸರು ಫೈಂಡ್ ಔಟ್ ಮಾಡ್ತಾರೆ. ಶಾಸಕ ಸಂಗಮೇಶ ಪುತ್ರ ಘಟನೆಯಲ್ಲಿ ಇದ್ದಾರೆ ಎಂದರೆ ಎಫ್‌ಐಆರ್ ನಲ್ಲಿ ಸೇರಿಸಿಕೊಳ್ತಾರೆ.ತನಿಖೆ ಮಾಡ್ತಾರೆ. ಅವರಿದ್ದಾರೆ ಅನ್ನೋದು ಗೊತ್ತಾದ್ರೆ ಸೇರಿಸಿಕೊಳ್ತಾರೆ. ಡಿವೈಎಸ್‌ಪಿಗೆ ಸೂಚನೆ ಕೊಟ್ಟಿದ್ದೇವೆ.ತುರ್ತಾಗಿ ವರದಿ ಕೊಡಲು ಹೇಳಿದ್ದೇವೆ ಎಂದು ಹೇಳಿದರು.


